ಸಂಪಾದನೆಯ ಸಿದ್ಧವೀರಣಾರ್ಯ

	ಸು. 1600. ವೀರಶೈವ ಕವಿ.  ಎಳಮಲೆಯ ಗುರುಶಾಂತದೇವನ (ಸು. 1565) ಶಿಷ್ಯ. ಸಂಪಾದನೆಯ ಪರ್ವತೇಶ್ವರನ (ಸು. 1698) ಚತುರಾಚಾರ್ಯ ಪುರಾಣದಲ್ಲಿ ಜ¾õÉದು ಶೈವವ ವೀರಶೈವವಂ ಸ್ಥಾಪಿಸಿದಂ ಎಂದು ಈತನನ್ನು ಹೊಗಳಿದೆ.  ಕವಿ ತನ್ನನ್ನು ವೀರಮಾಹೇಶ್ವರಾಚಾರ್ಯವರ್ಯಾ, ವೀರಶೈವ ಷಟ್‍ಸ್ಥಲಮಾರ್ಗಸಂಸ್ಥಾಪನಾಗ್ರಗಣ್ಯ ಶಿವಯೋಗೀಂದ್ರ ಎಂದು ವಿಶೇಷಿಸಿಕೊಂಡಿದ್ದಾನೆ.

	ಇವನು ಅನಾದಿ ವೀರಶೈವ ಸಾರಸಂಗ್ರಹ ಎಂಬ ಗ್ರಂಥವನ್ನೂ ಆಚರಣೆಯ ಸಂಬಂಧ ವಚನ (ಬೇರೆ ಬೇರೆ ವಚನಕಾರರ 275 ವಚನಗಳು), ಲಿಂಗಸ್ತೋತ್ರ ವಚನ (108 ವಚನಗಳು), ಮಿಶ್ರಸ್ತೋತ್ರ ವಚನ (111 ಸಾಂಗತ್ಯ ಪದ್ಯಗಳು), ಸರ್ವಜ್ಞಮೂರ್ತಿ ತ್ರಿವಿಧಿ (ಸರ್ವಜ್ಞನ ವಚನಗಳ ಸಂಕಲನ), ಪಾದಸ್ತೋತ್ರ ಎಂಬ ಸಂಕಲನಗಳನ್ನು ರಚಿಸಿದ್ದಾನೆ ಮತ್ತು ಸಂಪಾದಿಸಿದ್ದಾನೆ. ಪಾದಸ್ತೋತ್ರ ಉಪಲಬ್ಧವಿಲ್ಲ.

	ಅನಾದಿ ವೀರಶೈವ ಸಾರಸಂಗ್ರಹ ಸಂಸ್ಕøತದಲ್ಲಿದೆ. ಇದರಲ್ಲಿ 27 ಪ್ರಕರಣಗಳೂ 3,219 ಶ್ಲೋಕಗಳೂ ಇದ್ದು ಇವು ಸಕಲ ವೇದಾಗಮ ಶಾಸ್ತ್ರಪುರಾಣ ಶಿವರಹಸ್ಯಾದಿಗಳ ಸಾರವನ್ನು ಸಂಗ್ರಹವಾಗಿ ಒಳಗೊಂ ಡಿವೆ. ಮೊದಲ ಪ್ರಕರಣದಲ್ಲಿ ವೀರಶೈವ ಪ್ರಶಂಸೆ, ಶೈವ-ವೀರಶೈವ ಭೇದ ನಿರೂಪಣ, ಗ್ರಂಥಕರ್ತೃ ವಿಚಾರಗಳು ಉಕ್ತವಾಗಿವೆ. ಮುಂದೆ ಕ್ರಮವಾಗಿ ಅನಾದಿ ಭಕ್ತಸ್ಥಲ, ಜಂಗಮ, ಶೂನ್ಯಲಿಂಗ, ನಿಷ್ಕಲಲಿಂಗ, ಮಹಾಲಿಂಗ, ಪ್ರಾಣಲಿಂಗ, ವಿಶ್ವೋತ್ಪತ್ತಿ, ಪಿಂಡಸ್ಥಲ, ಪಿಂಡಜ್ಞಾನ, ಸಂಸಾರಹೇಯ, ಗುರುಕಾರುಣ್ಯ, ಲಿಂಗಧಾರಣ, ಗುರುಲಿಂಗಜಂಗಮ, ಪ್ರಸಾದ, ಪಾದೋದಕ, ವಿಭೂತಿ ರುದ್ರಾಕ್ಷ ಮಹಾಮಂತ್ರ ಮಾಹಾತ್ಮ್ಯ ಗಳೂ ಷಟ್‍ಸ್ಥಲಗಳೂ ವರ್ಣಿತವಾಗಿವೆ.								
		(ಎಮ್.ಜಿ.ಎನ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ